September 27, 2020
Times of Deenabandhu
  • Home
  • Uncategorized
  • ಪ್ರಬುದ್ಧತೆ ಮೆರೆದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ್ರು…
Uncategorized ಚಿಕ್ಕಮಗಳೂರು ಜಿಲ್ಲೆ

ಪ್ರಬುದ್ಧತೆ ಮೆರೆದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ್ರು…

ಶೃಂಗೇರಿ ಡಿ.2: “ನನ್ನ ಕಛೇರಿಗಳಾದ ಕೊಪ್ಪದಲ್ಲಿ ಸಮರ್ಪಣಾ, ಎನ್.ಆರ್.ಪುರದಲ್ಲಿ ಸಮನ್ವಯ, ಶೃಂಗೇರಿಯಲ್ಲಿ ಸದ್ಭಾವನ ಕಾರ್ಯಾಲಯಗಳು ಸರ್ಕಾರಿ ಕಟ್ಟಡದಲ್ಲಿಯೇ ಇದ್ದು, ಪ್ರತಿ ಸೋಮವಾರ ಕೊಪ್ಪ ಮತ್ತು ಶೃಂಗೇರಿ ಹಾಗೂ ಶನಿವಾರ ಎನ್.ಆರ್.ಪುರ ಕಾರ್ಯಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ನೀವು ಸಹ ಈ ಕಛೇರಿಯನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ನಾವಿಬ್ಬರು ಸೇರಿ ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸೋಣ, ಇದರಲ್ಲಿ ರಾಜಕೀಯ ಹಿತಾಸಕ್ತಿಗಿಂತ ಈ ಕ್ಷೇತ್ರದ ಜನತೆಯ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ” ಇದು ಒಬ್ಬ ಶಾಸಕ ಮತ್ತೊಬ್ಬ ಶಾಸಕರಿಗೆ ಬರೆದ ಪತ್ರ…

ನಂಬುತ್ತೀರಾ,.? ಇಂತಹದ್ದೊಂದು ಭಾವನೆ. ನಡೆ, ನುಡಿಗಳು  ಇನ್ನೂ ನಮ್ಮ ರಾಜಕಾರಣಿಗಳಲ್ಲಿ ಇದೆಯಾ? ಎನ್ನುವಂತಹ ಸಂದರ್ಭದಲ್ಲಿ ಈ ಪತ್ರ ನೋಡಿ ಆಶ್ಚರ್ಯಾ ಜೊತೆಗೆ ಮೆಚ್ಚುಗೆ ವ್ಯಕ್ತವಾಗುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಶಾಸಕರಾದ ಎಂ.ಕೆ.ಪ್ರಾಣೇಶ್‍ರವರು ಶೃಂಗೇರಿ ವಿಧಾನಸಭಾ ಕ್ಷೇತ್ರವನ್ನು ‘ನೋಡಲ್ ವಿಧಾನಸಭಾ ಕ್ಷೇತ್ರ’ ವಾಗಿ ಪಡೆದುಕೊಂಡಿದ್ದಾರೆಂದು ಕೆಲವು ಅಧಿಕಾರಿಗಳಿಂದ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡರಿಗೆ ಮಾಹಿತಿ ಸಿಕ್ಕಿದೆ. ಆ ಮಾಹಿತಿ ಸಿಕ್ಕ ಕೂಡಲೇ ಪಕ್ಷಬೇಧವೆನ್ನದೇ ಪ್ರಾಣೇಶ್‍ರವರಿಗೆ ಇಂತಹದ್ದೊಂದು ಪತ್ರವನ್ನು ಬರೆದು ತಮ್ಮ  ಪ್ರಬುದ್ಧೆಯನ್ನು ಮೆರೆದಿದ್ದಾರೆ.

ಆ ಪತ್ರದಲ್ಲಿ ಅವರು ಇನ್ನೂ ಮುಂದುವರಿದು, “ನಾವು ಪ್ರತಿನಿಧಿಸುವ ಪಕ್ಷಗಳು ಬೇರೆ ಬೇರೆಯಾಗಿರುತ್ತವೆ. ನಾನು ಮತ್ತು ನೀವು ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದೇವೆ. ರಾಜಕೀಯ ಪಕ್ಷಗಳು ಹೊರತಾಗಿಯೂ ನಾವಿಬ್ಬರು ಆತ್ಮೀಯರಾಗಿದ್ದೆವು, ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಇರುವ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು ಸಹಜವಾಗಿರುತ್ತದೆ. ಆದರೆ ನನಗೆ ಇಂತಹ ರಾಜಕೀಯ ಮೇಲಾಟಗಳ ಮೇಲೆ ನಂಬಿಕೆ ಇರುವುದಿಲ್ಲ. ತಾವು ಈ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಪಕ್ಷದ ಪ್ರತಿನಿಧಿಯಾಗಿರುವ ನೀವು ಈ ಕ್ಷೇತ್ರಕ್ಕೆ ವಿಶೇಷ ಹೆಚ್ಚಿನ ಅನುದಾನವನ್ನು ಒದಗಿಸಬೇಕೆಂದು ನಿಮ್ಮನ್ನು ವಿನಂತಿಸುತ್ತೇನೆ” ಇದು  ಟಿ.ಡಿ.ರಾಜೇಗೌಡರ ಪತ್ರದ ಸಾರಂಶ.

ಬೇಶ್, ಗೌಡ್ರೆ…! ತಮ್ಮ ಈ  ವಿಶಾಲ ಮನಸ್ಸಿನ  ಯೋಚನೆಗಳು , ಸ್ವಲ್ಪಮಟ್ಟಿಗಾದರೂ ರಾಜಕೀಯ ಕಲುಷಿತಗಳು ದೂರವಾಗಿ ಆ ಮೂಲಕ ಜನರಿಗೆ, ಊರಿಗೆ ಒಳ್ಳೆಯದಾಗುವುದು ಕಂಡಿತ. ನಿಮ್ಮ ಈ ನಡೆ ಬೇರೆಯವರಿಗೆ ಮಾದರಿಯಾಗಲಿ..

 

 

 

 

 

Related posts

ಮಾ.೨ರಿಂದ ೪ವರೆಗೆ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ

Times fo Deenabandhu

ಕುವೆಂಪು ವಿವಿಯಲ್ಲಿ ವಿವಿಧ ಕೋರ್ಸ್‌ಗಳ ಪುನಾರಾವರ್ತಿತ ಪರೀಕ್ಷೆಗೆ ಅರ್ಜಿ ಆಹ್ವಾನ

Times fo Deenabandhu

ರಾಜ್ಯದಲ್ಲೇ ಮಾದರಿ ಕಾರ್ಯಕ್ರಮ; ಅನುಪಿನಕಟ್ಟೆಯ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ತಂದೆ-ತಾಯಿಯರ ಪಾದಪೂಜೆ

Times fo Deenabandhu