Times of Deenabandhu
ಕ್ರೈಮ್ ಮುಖ್ಯಾಂಶಗಳು ರಾಜ್ಯ

ಕೇವಲ 1 ಗಂಟೆಯಲ್ಲಿ ಪಶುವೈದ್ಯೆ ಬದುಕನ್ನೇ ನರಕ ಮಾಡಿದ ಪಾಪಿಗಳು…

ಹೈದರಾಬಾದ್ ನ.30: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್‍ನ ಪಶುವೈದ್ಯೆ ಕೊಲೆ ಪ್ರಕರಣದಲ್ಲಿ ಇಂದು ಸೈಬರಬಾದ್ ಪೊಲೀಸರು ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ನಾರಾಯಣ ಪೇಟೆಯವರೆಂದು ಹೇಳಲಾದ ಚಾಲಕ ಮೊಹಮ್ಮದ್ ಆರೀಪ್, ಕ್ಲೀನರ್ ಜೊಲ್ಲು ನವೀನ, ಇನ್ನೊಬ್ಬ ಕ್ಲೀನರ್ ಚೆನ್ನಕೇಶವಲು, ಚಾಲಕ ಜೊಲ್ಲು ಶಿವ ಇವರೇ ಬಂದಿತ ಆರೋಪಿಗಳು.

ಮೊನ್ನೆ ದಿನ ಚತನ್‍ಪಲ್ಲಿ ಸೇತುವೆ ಅಡಿಯಲ್ಲಿ ಭಾಗಶ: ಸುಟ್ಟು ಹಾಕಲಾದ ದೇಹ ಪತ್ತೆಯಾಗಿತ್ತು. ಅದು ಕೊಲ್ಲೂರು ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆದ್ದೆಂದು ತಿಳಿಯಿತು. ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಶಂಶಾಬಾದ ಟೋಲ್ ಪ್ಲಾಜಾದಲ್ಲಿ ಮದ್ಯ ಸೇವಿಸುತ್ತಿದ್ದ ಆರೋಪಿಗಳು 6.00 ಗಂಟೆ ವೇಳೆಗೆ ವೈದ್ಯೆ ತನ್ನ ದ್ವಿಚಕ್ರ ವಾಹನವನ್ನು ಪಾರ್ಕಿಂಗ್ ಮಾಡುತ್ತಿರುವುದನ್ನು ನೋಡಿದ್ದಾರೆ. ಆಗಲೇ ಆಕೆಯ ಮೇಲೆ ಅತ್ಯಾಚಾರ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕಾಗಿ ಟೈರನ್ನು ಪಂಕ್ಚರ್ ಮಾಡಿದ್ದಾರೆ. ರಾತ್ರಿ 9 ಗಂಟೆಗೆ ಪಶುವೈದ್ಯೆ ತನ್ನ ಡ್ಯೂಟಿ ಮುಗಿಸಿ ಹಿಂದಿರುಗಿ ಬಂದಿದ್ದಾರೆ. ಪಂಕ್ಚರ್ ಆಗಿರುವ ಸ್ಕೂಟರನ್ನು ಪಂಕ್ಚರ್ ಹಾಕಿಸುವುದಾಗಿ ಆರೀಫ್ ಮತ್ತು ಶಿವ ಹೇಳಿದರು. ನಂತರ ಸ್ವಲ್ಪಹೊತ್ತಿನಲ್ಲಿಯೇ ಹಿಂದಿರುಗಿ ಬಂದು ಯಾವ ಅಂಗಡಿಯೂ ಬಾಗಿಲು ತೆರೆದಿಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಆರೀಪ್ ಮತ್ತು ಶಿವ ಲಾರಿಯನ್ನು ಟೋಲ್ ಪ್ಲಾಜಾದ ಬಳಿ ನಿಲ್ಲಿಸಿದ್ದರು. 9.20ರ ವೇಳೆಗೆ ವೈದ್ಯೆ ತನ್ನ ತಂಗಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿ ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ. ನಂತರ ನಾಲ್ವರು ಸೇರಿ ಆಕೆಯನ್ನು ಸಮೀಪದ ಕಾಂಪೌಂಡ್ ಒಂದರ ಒಳಗೆ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಈ ಪಾಪಿಗಳು ಅತ್ಯಾಚಾರ, ಕೊಲೆ ಇವೆಲ್ಲವನ್ನೂ ಒಂದು ಗಂಟೆಯಲ್ಲಿ ಮುಗಿಸಿಬಿಟ್ಟಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಅತ್ಯಾಚಾರವೆಸಗುವ ಮುನ್ನ ಎಲ್ಲರೂ ಮದ್ಯ ಸೇವಿಸಿ ನಂತರ ವೈದ್ಯೆಗೂ ಬಲವಂತವಾಗಿ ಕುಡಿಸಿ ಅತ್ಯಾಚಾರಗೈದಿದ್ದಾರೆ. ಆಕೆ ಕಿರುಚಾಡದಂತೆ ಬಾಯಿಯನ್ನು ಬಿಗಿಯಾಗಿ ಬಂದು ಮಾಡಿ ಉಸಿರುಗಟ್ಟಿಸಿ 10.20ರ ಸುಮಾರಿಗೆ  ಸಾಯಿಸಿಬಿಟ್ಟಿದ್ದಾರೆ.

ಆರೋಪಿ ಆರೀಪ್, ಇತರೆ ಆರೋಪಿಗಳು ಅರಾಮ್‍ಘರ್ ಎಕ್ಸ್ ರಸ್ತೆಯ ಲಾರಿಯಲ್ಲಿದ್ದ ಇಟ್ಟಿಗೆಗಳನ್ನು ಇಳಿಸಿ ನಾರಾಯಣಪೇಟೆಯ ತನ್ನ ಮನೆಗೆ ಹಿಂದಿರುಗಿದ್ದಾರೆ. ಟೋಲ್ ಪ್ಲಾಜಾದ ಸಿಬ್ಬಂದಿ ಟೋಲ್ ಪ್ಲಾಜಾದ ಹತ್ತಿರ ಇರುವ ಗ್ರೌಂಡ್‍ನಲ್ಲಿ ಲಾರಿಯೊಂದನ್ನು ನಿಲ್ಲಿಸಿದ್ದನ್ನು ತಿಳಿಸಿದ ಮಾಹಿತಿಯ ಮೇರೆಗೆ ಲಾರಿ ಮಾಲೀಕ ಶ್ರೀನಿವಾಸರೆಡ್ಡಿ ಅವರನ್ನು ವಿಚಾರಿಸಿದಾಗ ಆರೀಪ್ ಮತ್ತು ಶಿವನ ಬಗ್ಗೆ ಮಾಹಿತಿ ದೊರೆತಿದೆ.

 

 

 

 

 

 

 

Related posts

ಪೇಜಾವರ ಶ್ರೀಗಳ ನಿಧನಕ್ಕೆ ಎನ್ನಾರೈ ಘಟಕದ ಆಖಿಲಭಾರತ ಕಾಂಗ್ರೆಸ್ ಅಧ್ಯಕ್ಷೆ ಡಾ.ಆರತೀ ಕೃಷ್ಣ ತೀವ್ರ ಸಂತಾಪ

Times fo Deenabandhu

 ಬಿಜೆಪಿ ಶಾಸಕ ನೇಗಿಯೇ ಮಗುವಿನ ಅಪ್ಪ, ಬೇಕಾದ್ರೆ ಡಿಎನ್​ಎ ಟೆಸ್ಟ್ ಮಾಡಿಸಿ- ರೇಪ್ ಪ್ರಕರಣ ದಾಖಲಿಸಿದ ಮಹಿಳೆ

Times fo Deenabandhu

ಸ್ಮಾರ್ಟ್‌ಸಿಟಿ ಅವಘಡದಲ್ಲಿ ಗರ್ಭೀಣಿಗೆ ಅನಾಹುತ: ಪರಿಹಾರಕ್ಕೆ ಆಗ್ರಹ

Times fo Deenabandhu