Times of Deenabandhu
  • Home
  • ಜಿಲ್ಲೆ
  • ದುಶ್ಚಟಗಳಿಂದ ದೂರ ಇರಿ – ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಕರೆ
ಜಿಲ್ಲೆ ಶಿವಮೊಗ್ಗ

ದುಶ್ಚಟಗಳಿಂದ ದೂರ ಇರಿ – ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಕರೆ

ಶಿವಮೊಗ್ಗ: ದುಶ್ಚಟಗಳಿಂದ ದೂರ ಇರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಕರೆ ನೀಡಿದರು.
ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪೊಲೀಸ್ ಇಲಾಖೆ ಮತ್ತು ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನಮ್ಮ ಸೇಫ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ದುಶ್ಚಟಗಳಿಗೆ ದಾಸನಾಗುವುದರಿಂದ ಮಾನಸಿಕ ಸ್ವಾಸ್ಥ್ಯ ಹದಗೆಡುವ ಜತೆಯಲ್ಲಿ ಸಾಮಾಜಿಕ ಆರೋಗ್ಯ ಸಹ ಹಾಳಾಗುತ್ತದೆ. ಸುರಕ್ಷತೆ ಅಂದರೆ ಮೊದಲು ಪ್ರತಿಯೊಬ್ಬ ವ್ಯಕ್ತಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸಾಮಾಜಿಕ ಆರೋಗ್ಯ ಉತ್ತಮವಾಗಿದ್ದಲ್ಲಿ ಪರಸ್ಪರ ಸಹಬಾಳ್ವೆ ಹಾಗೂ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಶಾಲೆಗೆ ಬರುವ ಹಾಗೂ ಹೋಗುವ ಸಂದರ್ಭಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕು. ದಿಕ್ಕು ತಪ್ಪಿಸುವ ವ್ಯಕ್ತಿ ಹಾಗೂ ಆಲೋಚನೆಗಳಿಂದ ದೂರ ಇರಬೇಕು. ಶಾಲಾ ಕಾಲೇಜಿನ ಹಂತದಲ್ಲಿ ಕೆಟ್ಟ ದಾರಿಯಲ್ಲಿ ಸಾಗಲು ಹಾಗೂ ಅನೇಕ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ದುಶ್ಚಟಗಳಿಗೆ ಬಲಿಯಾದಲ್ಲಿ ವೈಯುಕ್ತಿಕ ಜೀವನ ಹಾಳಾಗುತ್ತದೆ. ಇದು ಸಮಾಜದ ಮೇಲೆಯೂ ಪರಿಣಾಮ ಬೀರುತ್ತದೆ ಎಂದರು.

ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ನಿಯಮ ಪಾಲನೆ ಮಾಡದಿದ್ದರೆ ಉಂಟಾಗುವ ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಆಶಯದಿಂದ ನಮ್ಮ ಸೇಫ್ಟಿ ಕಾರ್ಯಕ್ರಮ ರೂಪಿಸಲಾಗಿದೆ. ಪೊಲೀಸ್ ಇಲಾಖೆ ಸಹಯೋಗದಲ್ಲಿ ಎಸ್.ಪಿ ಶಾಂತರಾಜು ಅವರ ನೇತೃತ್ವದಲ್ಲಿ ಪ್ರತಿ ಶನಿವಾರ ಶಾಲೆಗಳಲ್ಲಿ ಸುರಕ್ಷತೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ದುಶ್ಚಟಗಳಿಗೆ ವಿದ್ಯಾರ್ಥಿಯೊಬ್ಬ ಸಿಲುಕುವುದರಿಂದ ಸಾಮಾಜಿಕ ವ್ಯವಸ್ಥೆ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತುಕೊಳ್ಳಬೇಕು. ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಸೇರಿದಂತೆ ದುಶ್ಚಟಗಳಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.

ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎಸ್.ರಾಘವೇಂದ್ರ ಮಾತನಾಡಿ, ಮಕ್ಕಳಲ್ಲಿ ಬಾಲ್ಯದಿಂದಲೇ ಸುರಕ್ಷತೆಯ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಲು ಸಾಧ್ಯವಿದೆ ಎಂದು ಹೇಳಿದರು.
ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ’ಸ್ಟೂಡೆಂಡ್ ಪೊಲೀಸ್ ಕೆಡೆಟ್’ ರಚಿಸುವ ಮುಖಾಂತರ ವಿದ್ಯಾರ್ಥಿಗಳಲ್ಲಿ ಸುರಕ್ಷತೆ, ಕರ್ತವ್ಯ, ನಿಯಮ ಪಾಲನೆ ಪ್ರಾಮುಖ್ಯತೆ ಸೇರಿದಂತೆ ಅನೇಕ ವಿಚಾರಗಳ ಕುರಿತು ತಿಳವಳಿಕೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಕರಾದ ಮುಕುಂದ್, ದೊಡ್ಡವೀರಪ್ಪ, ಹಾಲಪ್ಪ, ಪಿ.ಎಸ್.ದೀಪು ಮತ್ತಿತರರು ಉಪಸ್ಥಿತರಿದ್ದರು. ೧ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ

Times fo Deenabandhu

ಕೊರೊನಾ ಎಫೆಕ್ಟ್ : ಶಿವಮೊಗ್ಗ ಜಿಲ್ಲೆ ತುಸು ಸುರಕ್ಷಿತ ಸ್ಥಿತಿಯಲ್ಲಿದೆ…. ಹಾಗೆಂದು ಮೈಮರೆಯಬಾರದು…..

ಯುವ ಮತದಾರರು ಜಾಗೃತರಾದಾಗ ಮಾತ್ರ ಪ್ರಜಾಪ್ರಭುತ್ವದ ಭವಿಷ್ಯ ಸಾಧ್ಯ

Times fo Deenabandhu