Times of Deenabandhu
  • Home
  • ಜಿಲ್ಲೆ
  • ಅಕ್ರಮ ಚಟುವಟಿಕೆಗಳ ಮೇಲೆ ಕ್ರಮ: ಎಸ್ಪಿ ಶಾಂತರಾಜು
ಜಿಲ್ಲೆ ಶಿವಮೊಗ್ಗ

ಅಕ್ರಮ ಚಟುವಟಿಕೆಗಳ ಮೇಲೆ ಕ್ರಮ: ಎಸ್ಪಿ ಶಾಂತರಾಜು

ಶಿವಮೊಗ್ಗ : ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ, ಜೂಜಾಟ, ಓಸಿ ಮತ್ತು ಮಟ್ಕಾ ಚಟುವಟಿಕೆಗಳನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು ಅವರು ತಿಳಿಸಿದ್ದಾರೆ.

ಈ ಅವಧಿಯಲ್ಲಿ 26ಗಾಂಜಾ ಮಾರಾಟ ಪ್ರಕರಣಗಳನ್ನು ದಾಖಲಿಸಿ 138ಕೆಜಿ ಹಸಿ ಗಾಂಜಾ ಮತ್ತು 11ಕೆಜಿ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮರಳು ಸಾಗಾಣಿಕೆಯ 8 ಪ್ರಕರಣಗಳನ್ನು ದಾಖಲಿಸಲಾಗಿದ್ದು, 66ಸಾವಿರ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. 41 ಇಸ್ಪೀಟು ಪ್ರಕರಣಗಳನ್ನು ದಾಖಲಿಸಿ 4ಲಕ್ಷ ರೂ. ನಗದು, 48 ಮೊಟಾರು ಬೈಕು ಹಾಗೂ 10 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಓಸಿ ಮಟ್ಕಾ ಮತ್ತು ಜೂಜಾಟದ 75ಪ್ರಕರಣಗಳಲ್ಲಿ 1.70ಲಕ್ಷ ರೂ. ನಗದು ಹಾಗೂ 5ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆ ಹಾಗೂ ಕ್ಲಬ್‍ಗಳಲ್ಲಿ ಅಕ್ರಮ ಇಸ್ಪೀಟು ಹಾಗೂ ಜೂಜಾಟದ 6ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 4ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Related posts

ಸಂಸದರ ನಿಧಿಯಿಂದ ಜಿಲ್ಲಾಡಳಿತಕ್ಕೆ 1.00 ಕೋಟಿ : ಶ್ರೀ ಬಿ.ವೈ.ರಾಘವೇಂದ್ರ

Times fo Deenabandhu

ಚೆಸ್ ಕ್ರೀಡೆ ವ್ಯಕ್ತಿತ್ವ ವಿಕಸನಗೋಳಿಸುತ್ತದೆ.: ಪ್ರಶಾಂತ್ ಚಿಪ್ರಗುತ್ತಿ

Times fo Deenabandhu

ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ  ಅವ್ಯವಹಾರ : ತನಿಖೆಗೆ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸದಸ್ಯರ ಆಗ್ರಹ