Times of Deenabandhu
  • Home
  • ಮುಖ್ಯಾಂಶಗಳು
  • ಈರುಳ್ಳಿ ದರ ಹೆಚ್ಚಳಕ್ಕೆ ಸಂಗ್ರಹಕಾರರ ಮತ್ತು ಬಿಜೆಪಿ ನಡುವಣ ಹೊಂದಾಣಿಕೆ ಕಾರಣ: ಎಎಪಿ
ಮುಖ್ಯಾಂಶಗಳು

ಈರುಳ್ಳಿ ದರ ಹೆಚ್ಚಳಕ್ಕೆ ಸಂಗ್ರಹಕಾರರ ಮತ್ತು ಬಿಜೆಪಿ ನಡುವಣ ಹೊಂದಾಣಿಕೆ ಕಾರಣ: ಎಎಪಿ

ಹೊಸದಿಲ್ಲಿ: ಈರುಳ್ಳಿ ಸಂಗ್ರಹಕಾರರು ಮತ್ತು ಬಿಜೆಪಿ ನಡುವಣ ಹೊಂದಾಣಿಕೆಯ ಪರಿಣಾಮ ಈರುಳ್ಳಿ ದರ ಏಕಾಏಕಿ ಏರಿಕೆಯಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಮತ್ತು ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.
ಈರುಳ್ಳಿ ದರ ಇಳಿಸುವ ಬಗ್ಗೆ ಕೇಂದ್ರ ಸರಕಾರ ಯಾಕೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದ ಸಂಜಯ್‌ ಸಿಂಗ್‌, ದಿಲ್ಲಿಯಲ್ಲಿ ಈರುಳ್ಳಿ ದರ ಹೆಚ್ಚಳಕ್ಕೆ ಕೇಂದ್ರ ಸರಕಾರ ಕಾರಣ. ರಾಷ್ಟ್ರೀಯ ಕೃಷಿ ಮತ್ತು ಮಾರುಕಟ್ಟೆ ಫೆಡರೇಷನ್‌ ನಿಗದಿತ ಪಡಿಸಿದ ರಿಯಾಯಿತಿ ದರಕ್ಕಿಂತ ಹೆಚ್ಚು ದರದಲ್ಲಿ ರಾಜ್ಯ ಸರಕಾರಕ್ಕೆ ಮಾರಟ ಮಾಡುತ್ತಿರುವುದರಿಂದ ಈರುಳ್ಳಿ ದರ ಹೆಚ್ಚಾಗಿದೆ ಎಂದು ಕಾರಣ ನೀಡಿದ್ದಾರೆ.

ರಿಯಾಯಿತಿ ದರದಲ್ಲಿ ಈರುಳ್ಳಿ ಒದಗಿಸುವಂತೆ ಅರಂವಿಂದ ಕೇಂಜ್ರಿವಾಲ್‌ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಎನ್‌ಎಎಫ್‌ಇಡಿ ರಾಜ್ಯದಲ್ಲಿ ಪ್ರತಿ ಕಿಲೋಗೆ ರೂ.60ರಂತೆ ಮಾರಾಟ ಮಾಡಬೇಕು ಎಂದಿದೆ.

ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕೆಜಿ ಈರುಳ್ಳಿ ಬೆಲೆ 100 ರೂ. ದಾಟಿದೆ. ಸಾಮಾನ್ಯ ಜನರಿಗೆ ಈರುಳ್ಳಿ ಕೊಂಡುಕೊಳ್ಳುವುದು ಕಷ್ಟವಾಗಿರುವುದರಿಂದ ಬಿಹಾರ ಸರಕಾರದ ಸಹಕಾರಿ ಮಾರುಕಟ್ಟೆಯಲ್ಲಿ 35 ರೂ. ಗೆ ಕೆಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಈರುಳ್ಳಿ ಸಿಗುತ್ತಿರುವುದರಿಂದ ಕಿ.ಮೀ. ಗಟ್ಟಲೆ ಸಾಲುಗಳಲ್ಲಿ ನಿಂತು ಜನ ಈರುಳ್ಳಿ ಕೊಂಡುಕೊಂಡಿದ್ದಾರೆ. ಇನ್ನು, ಸಿಬ್ಬಂದಿ ಹೆಲ್ಮೆಟ್‌ ಧರಿಸಿ ಈರುಳ್ಳಿ ನಿಡುತ್ತಿದ್ದದ್ದು ಸಹ ವಿಶೇಷವಾಗಿತ್ತು.

Related posts

ಒಂದೇ ವರ್ಷದಲ್ಲಿ 1 ಕೋಟಿ ರೂ. ‘ದುಡಿದ’ ಉತ್ತರ ಪ್ರದೇಶದ ಸರಕಾರಿ ಶಾಲಾ ಶಿಕ್ಷಕಿ!

ಮೊಸಳೆಯ ಕೊರಳಿನಲ್ಲಿ ಸಿಕ್ಕಿಬಿದ್ದ ಟೈರ್ ತೆಗೆದವರಿಗೆ ಇದೆ ಬಹುಮಾನ…!

Times fo Deenabandhu

 76 ಭಾರತೀಯ ಯೋಧರಿಗೆ ಗಾಯ, ಸೈನಿಕರ ಆರೋಗ್ಯದಲ್ಲಿ ಚೇತರಿಕೆ