September 27, 2020
Times of Deenabandhu
ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೆ ಸಹಿ ಸುದ್ದಿ…

ಬೆಂಗಳೂರು 29: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಒಂದು ಹುದ್ದೆಯ ಕರ್ತವ್ಯದ ಜೊತೆಯಲ್ಲಿಯೇ ಇನ್ನೊಂದು ಹುದ್ದೆಯಲ್ಲಿ ಪ್ರಭಾರ ವಹಿಸಿಕೊಂಡು ಸೇವೆ ನಿರ್ವಹಿಸುತ್ತಿದ್ದರೆ ಅಂತಹ ಆದಿಕಾರಿ, ನೌಕರರುಗಳಿಗೆ ಈ ಹಿಂದೆ ಶೇ 7.5 ರಷ್ಟು ಪ್ರಭಾರ ಭತ್ಯೆ ನೀಡಲಾಗುತ್ತಿದ್ದನ್ನು ಶೇ. 15 ಕ್ಕ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಸರ್ಕಾರಿ ನೌಕರರು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆ ಬೇರೆ ಹುದ್ದೆಯಲ್ಲಿ ಪ್ರಭಾರದಲ್ಲಿರಿಸಿದರೆ ಮೊದಲ 3 ತಿಂಗಳವರೆಗೆ ಶೆ 7.5 ದರದಲ್ಲಿ, ಆ ನಂತರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇ. 15 ದರದಲ್ಲಿ ಪ್ರಭಾರ ಭತ್ಯೆಯ ದರವನ್ನು ನಿಗಧಿ ಪಡಿಸಿಲಾಗಿದೆ.

ಈ ಕುರಿತು ಕರ್ನಾಟಕ ನಾಗರಿಕ ಸೇವಾ ನಿಯಮವಳಿಗಳ ನಿಯಮ 32 ಮತ್ತು 68ರ ಅಡಿಯಲ್ಲಿ ಸರ್ಕಾರ ಇದನ್ನು ಜಾರಿಗೊಳಿಸಿದ್ದು, ಈ ಆದೇಶವು 30.04.2019ರಿಂದಲೇ ಜಾರಿಗೆ ಬರಲಿದೆ. ಆದರೆ 30.04.2019ಕ್ಕಿಂತ ಹಿಂದೆ ಎಷ್ಟೇ ತಿಂಗಳು ಪ್ರಭಾರದಲ್ಲಿದ್ದರೂ ಕೂಡ ಈ ಹಿಂದಿನ ದರವನ್ನೇ ನೀಡಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ತಾಖೀತು ಮಾಡಲಾಗಿದೆ.

 

 

 

 

 

 

 

 

 

 

 

 

 

Related posts

ಈರುಳ್ಳಿ ಕಾವಲಿಗೂ ಸಿಸಿಟಿವಿ ಕ್ಯಾಮರಾ ಮೊರೆಹೋದ ಮಾರಾಟಗಾರ: ನಿಬ್ಬೆರಗಾದ ಗ್ರಾಹಕರು!

Times fo Deenabandhu

ಕಾಡಾನೆ ದಾಳಿಗೆ ಅರಣ್ಯ ರಕ್ಷಕ ದುರ್ಮರಣ; ಇನ್ನಿಬ್ಬರು ಅರಣ್ಯ ರಕ್ಷಕರು ಬಚಾವ್​

Times fo Deenabandhu

ರೇವತಿಯಂತಹ ಹುಡುಗಿ ಸಿಗಲು ನಾನು ಪುಣ್ಯ ಮಾಡಿದ್ದೆ, ಅವರು ಖಂಡಿತ ಹೊಂದಿಕೊಂಡು ಹೋಗುತ್ತಾರೆ: ನಿಖಿಲ್​ ಕುಮಾರಸ್ವಾಮಿ

Times fo Deenabandhu